ಸಿನಿಮಾದ ಹಾಡುಗಳಿಗೆ ತಮ್ಮದೇ ಸಾಹಿತ್ಯ ಬರೆದು ಹಾಡಿಕೊಳ್ಳುವುದು ಬಹಳ ಜನರಿಗಿರುವ ಖಯಾಲಿ. ಅದರ ಪಲ್ಲವಿಗೋ, ಚರಣಕ್ಕೋ ಹೊಂದುವಂತಹಾ ಒಂದು ಚಂದದ ಸಾಲು ಸಿಕ್ಕಿಬಿಟ್ಟರೆ ಸಾಕು, ಮಂದೆ ಅದು ತನ್ನಂತಾನೇ ಬರೆಸಿಕೊಳ್ಳುತ್ತಾ ಮತ್ತೊಂದು ಹಾಡೇ ಆಗಿಬಿಡುತ್ತದೆ. ಹೀಗೆ ಗುನುಗಿಕೊಳ್ಳುವವರ ಬಾಯಲ್ಲಿ ಅವರದೇ ಆದ ಹೊಸ ಹೊಸ ಸಾಹಿತ್ಯದ ಉಡುಗೆ ತೊಟ್ಟು, ಗುನುಗಿಸಿಕೊಂಡು, ಕೊನೆಗೆ ಅವರಲ್ಲೇ ಮುಗಿದುಹೋಗುವ ಸಿನಿಮಾ ಹಾಡುಗಳು ಅದೆಷ್ಟೋ?
ಹೀಗೆ ನಾನು ಗುನುಗಲಿಕ್ಕೆಂದೇ ಎರೆಡು ವರ್ಷಗಳ ಕೆಳಗೆ ಬರೆದಿದ್ದ ಸಾಹಿತ್ಯವೊಂದು ಮೋಹನ ತೋಡಾರ್ ಅವರ ಧ್ವನಿಗೆ ಸಿಕ್ಕಿ ಹಾಡಾಗಿದೆ. ಮಂಗಳೂರಿನ ಜನ ಯಾವುದೇ ಕಾರ್ಯಕ್ಕೆ ಕೂತರೂ ಶಿಲ್ಪಿಗಳಂತೆ ಕೆಲಸ ಮಾಡುತ್ತಾರೆ. ಒಂದು ಚಿಕ್ಕ ಸೂಜಿಯಂಚಿನಷ್ಟು ಬಿಂದುವನ್ನೂ ನಾಜೂಕಾಗಿ, ಆಸಕ್ತಿಯಿಂದ ರೂಪಿಸುತ್ತಾರೆ. ಮೋಹನರು ಮಾಡಿದ್ದೂ ಇದನ್ನೇ. ತಮ್ಮ ಅದೆಷ್ಟೋ ಅಮೂಲ್ಯ ಭಾನುವಾರಗಳನ್ನು ಖರ್ಚು ಮಾಡಿ, ಚಂದವಾಗಿ ಹಾಡಿ, ಎಡಿಟ್ ಮಾಡಿದ್ದಲ್ಲದೆ ಕೊನೆಗೆ ಅಂದವಾದ ವೀಡಿಯೋವನ್ನೂ ಮಾಡಿಕೊಟ್ಟಿದ್ದಾರೆ. ಆ ಮೂಲಕ ಗುನುಗಿ ನನ್ನೊಳಗೇ ಮುಗಿದುಹೋಗಬೇಕಿದ್ದ ಹಾಡೊಂದಕ್ಕೆ ಮರುಜೀವ ನೀಡಿದ್ದಾರೆ.
ಒಮ್ಮೆ ನೋಡಿ.. ಅಭಿಪ್ರಾಯ ತಿಳಿಸಿ..
ಅಂದಹಾಗೇ ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಮಾಡಿದ್ದಲ್ಲ. ಕೇವಲ ಹವ್ಯಾಸಕ್ಕಾಗಿ, ಮನೋರಂಜನೆಗಾಗಿ ಮಾಡಿದ ವೀಡಿಯೋ.
-ವಿನಾಯಕ ಅರಳಸುರಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ