ಮಾಲಿಕನ ಹೆಸರಿಲ್ಲದೆಯೇ ಅಂತರ್ಜಾಲದ ತಂಬೆಲ್ಲಾ ಅಲೆದಾಡುತ್ತಿರುವ ಉರ್ದು ಕವನವಿದು. ಬೆಳಗ್ಗೆ ವಾಟ್ಸಾಪ್ಪಿನಲ್ಲಿ ಬಂದು ಕೂತಿತ್ತು. ಯಥಾವತ್ತಾಗಿ ಬ್ಲಾಗಿಸಿದ್ದೇನೆ. ಒಮ್ಮೆ ಓದಿ...
ತೇರಿ ಡೋಲಿ ಉಠೀ
ಮೇರಿ ಮಯ್ಯತ್ ಉಠೀ
ಫೂಲ್ ತುಜ್ ಪರ್ ಭೀ ಬರ್ ಸೇ
ಫೂಲ್ ಮುಝ್ ಪರ್ ಭೀ ಬರ್ ಸೇ
ಫರ್ಕ್ ಸಿರ್ಫ್ ಇತ್ ನಾ ಸಾ ಥಾ
ತು ಸಜ್ ಗಯೀ
ಮುಝೆ ಸಜಾಯಾ ಗಯಾ...
ತು ಭೀ ಘರ್ ಕೋ ಚಲೀ
ಮೈ ಭೀ ಘರ್ ಕೋ ಚಲಾ
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ತು ಉಠ್ ಕೆ ಗಯೀ
ಮುಝೆ ಉಠಾಯಾ ಗಯಾ...
ಮೆಹೆಫಿಲ್ ವಹಾಂ ಭೀ ಥಿ
ಲೋಗ್ ಯಹಾಂ ಭೀ ಥೆ,
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ಉನ್ ಕಾ ಹಸ್ನಾ ವಹಾಂ
ಇನ್ಕಾ ರೋನಾ ಯಹಾಂ...
ಖಾಝೀ ಉಧರ್ ಭೀ ಥಾ
ಮೌಲ್ವೀ ಇಧರ್ ಭೀ ಥಾ
ದೋ ಬೋಲ್ ತೇರೆ ಪಢೆ
ದೋ ಬೋಲ್ ಮೇರೆ ಪಢೆ
ತೇರಾ ನಿಕಾಹ್ ಪಢಾ
ಮೇರಾ ಜನಾಝಾ ಪಢಾ
ಫರ್ಕ್ ಸಿರ್ಫ್ ಇತ್ನಾ ಸಾ ಥಾ..
ತುಝೆ ಅಪ್ನಾಯಾ ಗಯಾ
ಮುಝೆ ದಫ್ನಾಯಾ ಗಯಾ....
👇🏿👇🏿
ಅನುವಾದ- ಎಂ ಕೆ ಜೀರ್ಮುಖಿ
ನಿನ್ನ ಪಲ್ಲಕಿ ಹೊರಟಿತು
ನನ್ನ ಹೆಣವೂ;
ಹೂ ಮಳೆ ನಿನ್ನ ಮೇಲೆ ಸುರಿಯಿತು
ನನ್ನ ಮೇಲೂ;
ಆದರೆ ವ್ಯತ್ಯಾಸವಿಷ್ಟೆ,
ನೀನು ಸಜ್ಜಾಗಿದ್ದೆ
ನನ್ನನ್ನು ಸಜ್ಜುಗೊಳಿಸಿದ್ದರು
ನೀನು ಕೂಡ ಮನೆಗೆ ಹೊರಟಿದ್ದೆ,
ನಾನು ಕೂಡ ;
ಆದರೆ ವ್ಯತ್ಯಾಸವಿಷ್ಟೆ,
ನೀನು ಎದ್ದು ಹೊರಟಿದ್ದೆ
ನನ್ನನ್ನು ಎತ್ತಿಕೊಂಡು ಹೊರಟರು
ಸಮಾರಂಭ ಅಲ್ಲೂ ನಡೆಯುತಿತ್ತು
ಜನರ ಗುಂಪು ಇಲ್ಲೂ ಸೇರುತ್ತಿತ್ತು
ಆದರೆ ವ್ಯತ್ಯಾಸವಿಷ್ಟೆ
ಅಲ್ಲಿ ಮದರಂಗಿ ನಡೆಯುತಿತ್ತು
ಇಲ್ಲಿ ರೋಧನೆಯೇ ಕೇಳುತಿತ್ತು
ಗುರುಗಳು ಅಲ್ಲೂ ಇದ್ದರು
ಗುರುಗಳು ಇಲ್ಲೂ ಇದ್ದರು
ಅವರಲ್ಲಿ ನಿನಗೆ ನಿಕಾಹ್ ನೆರವೇರಿಸಿದರು
ಇವರಿಲ್ಲಿ ನನಗೆ ಶವಸಂಸ್ಕಾರ ನೆರವೇರಿಸಿದರು
ಆದರೆ ವ್ಯತ್ಯಾಸವಿಷ್ಟೆ
ನಿನ್ನನ್ನು ಅಲ್ಲಿ ತಮ್ಮದಾಗಿಸಿಕೊಂಡರು
ನನ್ನನ್ನು ಇಲ್ಲಿ ಮಣ್ಣಾಗಿಸಿದರು
**************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ